ತ್ರಾಸಿ, ನವೆಂಬರ್ 1, 2026: ಡಾನ್ ಬಾಸ್ಕೋ ಶಾಲೆ, ತ್ರಾಸಿಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಹಾಗೂ ನಾಡಭಕ್ತಿ ಮೆರೆಯುವ ವಾತಾವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕದ ರೋಮಾಂಚಕ ಬಣ್ಣಗಳನ್ನು ಪ್ರತಿಬಿಂಬಿಸುವ ಧ್ವಜಗಳಿಂದ ಶಾಲೆಯ ಆವರಣವನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಬೆಳಿಗ್ಗೆ 9.30ಕ್ಕೆ, ಶಾಲೆಯ ಆಡಳಿತ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ವಂದನೀಯ ಗುರುಗಳಾದ ಫಾ. ಮ್ಯಾಕ್ಸಿಮ್ ಡಿ’ಸೋಜಾರವರ ಅನುಪಸ್ಥಿತಿಯಲ್ಲಿ, ಆಡಳಿತ ಉಪನಿರ್ದೇಶಕರು ಹಾಗೂ ಉಪಪ್ರಾಂಶುಪಾಲರಾದ ವಂದನೀಯ ಗುರುಗಳಾದ ಫಾ. ಸಂದೇಶ್ ಫೆರ್ನಾಂಡಿಸ್ರವರು ಅತ್ಯಂತ ಭಕ್ತಿಪೂರ್ವಕವಾಗಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಭಕ್ತಿಯಿಂದ ಕನ್ನಡಾಂಬೆಗೆ ಪುಷ್ಪ ನಮನವನ್ನು ಸಲ್ಲಿಸಿದರು. ನಾಡಗೀತೆ ಹಾಡುವ ಮೂಲಕ ನಾಡಿನ ಹೆಮ್ಮೆಯನ್ನು ಎಲ್ಲೆಡೆ ಪಸರಿಸಲಾಯಿತು. ಕನ್ನಡ ಶಿಕ್ಷಕರು, ಉಪಪ್ರಾಂಶುಪಾಲರು ಹಾಗೂ ಶಾಲಾ ಆಡಳಿತ ನಿರ್ವಾಹಕರು ಅತಿಥಿಗಳಾಗಿ ಉಪಸ್ಥಿತರಿದ್ದು ಈ ಸಂದರ್ಭವನ್ನು ಅಲಂಕರಿಸಿದರು.
ಅಕ್ಟೋಬರ್ 31, 2026
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಸಾರುವ 71ನೇ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ ತ್ರಾಸಿಯ ಡಾನ್ ಬಾಸ್ಕೋ ಶಾಲೆಯಲ್ಲಿ ಅತ್ಯಂತ ಸಂಭ್ರಮ ಹಾಗೂ ಹೆಮ್ಮೆಯಿಂದ ಸಂಜೆ 3.00 ಗಂಟೆಗೆ ಆಚರಿಸಲಾಯಿತು. ಶಾಲೆಯ ಆವರಣವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ತೊಟ್ಟು, ನಾಸಿಕ್ ಬ್ಯಾಂಡ್ ವಾದ್ಯಗಳ ನಾದ ಹಾಗೂ ಕನ್ನಡ ನಾಡಿನ ಜಯಘೋಷಗಳೊಂದಿಗೆ ಆಗಮಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪುರ ವಾಕ್ವಾಡಿ ‘ಗುರುಕುಲ ಪಬ್ಲಿಕ್ ಸ್ಕೂಲ್’ ಐದು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಜಂಟಿ ನಿರ್ದೇಶಕರಾದ ಶ್ರೀಮತಿ ಅನುಪಮಾ ಎಸ್. ಶೆಟ್ಟಿಯವರು ಆಗಮಿಸಿದ್ದರು. ಶಾಲೆಯ ಆಡಳಿತ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ವಂದನೀಯ ಗುರುಗಳಾದ ಫಾ. ಮ್ಯಾಕ್ಸಿಮ್ ಡಿ’ಸೋಜಾರವರ ಅನುಪಸ್ಥಿತಿಯಲ್ಲಿ, ಆಡಳಿತ ಉಪನಿರ್ದೇಶಕರು ಹಾಗೂ ಉಪಪ್ರಾಂಶುಪಾಲರಾದ ವಂದನೀಯ ಗುರುಗಳಾದ ಫಾ. ಸಂದೇಶ್ ಫೆರ್ನಾಂಡಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ನಿರ್ವಾಹಕರಾದ ವಂದನೀಯ ಗುರುಗಳಾದ ಫಾ. ಅರ್ನಾಲ್ಡ್ ಮಥಾಯಸ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿವಿಯನ್ ಕ್ರಾಸ್ತಾ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ರೀನಾ ಮೆಂಡೋನ್ಸಾ ಉಪಸ್ಥಿತರಿದ್ದರು. ಶಾಲಾ ಸಂಸತ್ತಿನ ವಿದ್ಯಾರ್ಥಿ ನಾಯಕರು ಮತ್ತು ನಾಯಕಿಯರೂ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದರು.
ಎಲ್ಲಾ ಗಣ್ಯರನ್ನು ಶಾಲಾ ಸಂಸತ್ತಿನ ವಿವಿಧ ಗುಂಪುಗಳ ನಾಯಕರೊಂದಿಗೆ ನಾಸಿಕ್ ಬ್ಯಾಂಡ್, ಕಲಶ ಹಾಗೂ ಆರತಿ ಬೆಳಗುವ ಮೂಲಕ ಭವ್ಯವಾಗಿ ವೇದಿಕೆಗೆ ಸ್ವಾಗತಿಸಲಾಯಿತು. ಕಾರ್ಯಕ್ರಮವು ಯಕ್ಷಗಾನ ಪ್ರದರ್ಶನ ಹಾಗೂ ವಿದ್ಯಾರ್ಥಿಗಳ ಸ್ವಾಗತ ನೃತ್ಯದೊಂದಿಗೆ ಆರಂಭವಾಯಿತು. ಶಿಕ್ಷಕಿ ಪವಿತ್ರರವರು ಸ್ವಾಗತ ಭಾಷಣ ಮಾಡಿದರು. ನಂತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತದನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಪೋಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ವಂದನೀಯ ಗುರುಗಳಾದ ಫಾ. ಸಂದೇಶ್ ಫೆರ್ನಾಂಡಿಸ್ರವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಅನುಪಮಾ ಎಸ್. ಶೆಟ್ಟಿಯವರು ಕನ್ನಡದ ಮಹತ್ವವನ್ನು ಸಾರುತ್ತಾ, “ನಾವು ಯಾವುದೇ ಸ್ಥಳದಲ್ಲಿದ್ದರೂ ಕನ್ನಡವೇ ನಮ್ಮ ಮೂಲಮಂತ್ರವಾಗಿರಬೇಕು ಹಾಗೂ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಆಸಕ್ತಿ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ನಂತರ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳ ನೃತ್ಯ ಹಾಗೂ ಕಲಾತ್ಮಕ ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಶಿಕ್ಷಕಿ ಸುಜಾತಾ ಡಯಾಸ್ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಸಂಪೂರ್ಣ ಆಯೋಜನೆಯನ್ನು ಶಿಕ್ಷಕಿಯರಾದ ಸುಲೇಖಾ ಶೆಟ್ಟಿ ಹಾಗೂ ಅನಿತಾ ಆಚಾರ್ಯರವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಒಟ್ಟಾರೆಯಾಗಿ, ಕನ್ನಡ ಭಾಷೆ, ನಾಡು ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಹೆಚ್ಚಿಸಿದ ಈ 71ನೇ ರಾಜ್ಯೋತ್ಸವ ಕಾರ್ಯಕ್ರಮವು ಎಲ್ಲರಿಗೂ ಸಂತಸ ಮತ್ತು ಹೆಮ್ಮೆಯ ಕ್ಷಣಗಳನ್ನು ನೀಡಿ, ಯಶಸ್ವಿಯಾಗಿ ಸಂಪನ್ನಗೊಂಡಿತು。

